ನೇರದಾರಿ

ಈ ಜೀವನ ಎಂಬ ಪ್ರಯಾಣದಲ್ಲಿ ನಾವು ಸಂಧಿಸುವ ವ್ಯಕ್ತಿಗಳು ಆಕಸ್ಮಿಕ,ಅಗಲಿಕೆ ಅನಿವಾರ್ಯ, ಹಾಗೆಯೇ ಅವರವರ ನಿಲ್ದಾಣ ಬಂದ ಕೂಡಲೇ ಇಳಿಯಲೇ ಬೇಕು.ಕೆಲವರು ದೀರ್ಘ ಪ್ರಯಾಣ ಮಾಡಬಹುದು.ಇನ್ನು ಕೆಲವರು ಸಮೀಪ ಪ್ರಯಾಣದಲ್ಲಿರಬಹುದು.ನಾವೀಗ ಈ ಪ್ರಯಾಣದ ಯಾವ ಸ್ಟೇಜ್ ನಲ್ಲಿದ್ದೇವೆಂದು ಬಲ್ಲವನು ಒಬ್ಬನೇ (ಅಲ್ಲಾಹ್)ಅವನೇ ನಮ್ಮೆಲ್ಲರ ಸರ್ವ ಪಾಲಕ.ಅವನಲ್ಲದೆ ಬೇರೆ ಆರಾಧ್ಯನಿಲ್ಲ.ಅಲ್ಲಾಹ್ ನಮ್ಮೆಲ್ಲರ ಕೊನೆಯ ಪಯಣವನ್ನು ಸುಗಮ ಗೊಳಿಸಿ, ನಮ್ಮೆಲ್ಲರನ್ನು ಜನ್ನತುಲ್ ಫಿರ್ದೌಸ್ ನಲ್ಲಿ ಒಂದು ಗೂಡಿಸಲಿ

 
>
  • ಹದೀಸ್ ಗ್ರಂಥಗಳಿಂದ
    ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್)
    ಸೂರಃ ಆಲು ಇಮ್ರಾನ್ 3:110
    ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ).
    ಇಣುಕಿ ಹೋದವರು

    satyasandesha
    ಈಗ ನೋಡುತ್ತಿರುವವರು
    ವೀಕ್ಷಣಾಗಾರರ ಸ್ಥಳ
    Locations of visitors to this page
    ಇಷ್ಟರವರೆಗೆ ಬರೆದದ್ದು
    ಸೊತ್ತ್ತ್ತು...
    Saturday, October 3, 2009
    ಪ್ರತೀ ಕ್ಷಣವೂ
    ಪ್ರತೀ ದಿನವೂ
    ರಕ್ತ ಬೆವರಾಗಿಸಿ ದುಡಿದು
    ಇತರರಿಗಾಗಿ ಉಳಿಸಿ
    ಹೋಗುವ ಸಂಪತ್ತು.
    posted by ASHRAF @ 7:01 AM   4 comments
    ನೆನಪು
    ಕೆಲವರು ಬದುಕಿದರೂ
    ಸತ್ತಂತಿರತ್ತಾರೆ.
    ಇನ್ನು ಕೆಲವರೂ
    ಸತ್ತರೂ ಬದುಕಿದಂತಿರುತ್ತಾರೆ
    ಸುಂದರ ನೆನಪುಗಳೊಂದಿಗೆ...’
    posted by ASHRAF @ 6:59 AM   1 comments
    ಮರಣ
    ಪ್ರತೀ ಕ್ಷಣವೂ
    ಪ್ರತೀ ನಿಮಿಷವೂ
    ನೆರಳಿನಂತೆ ಹಿಂಬಾಲಿಸುವ
    ಕಾವಲುಗಾರ.
    posted by ASHRAF @ 6:58 AM   0 comments
    ಸ್ವಾರ್ಥ
    Wednesday, September 30, 2009
    ನಾಲ್ಕು ದಿಕ್ಕಿನಲ್ಲಿಯೂ
    ತನ್ನ ಕೆನ್ನಾಲಿಗೆಯನ್ನು ಚಾಚುತ್ತಾ,
    ಯಾವ ಬಂಧುತ್ವಕ್ಕೂ,
    ಯಾರ ಭಾಂದವ್ಯ ವನ್ನು ಲೆಕ್ಕಿಸದೆ
    ಎಲ್ಲರನ್ನೂ ಸುಟ್ಟು ಭಸ್ಮ ಮಾಡುತ್ತಾ
    ಕೊನೆಗೆ.. ತನ್ನನ್ನು ತಾನೇ ಸುಡುತ್ತಿರುವ
    ಬಹು ಕ್ರೂರವಾದ ಬೆಂಕೆ ಕಿಡಿ..
    posted by ASHRAF @ 9:16 PM   0 comments
    ನಿಸ್ಸಹಾಯಕ
    ಎಷ್ಟೆಲ್ಲಾ ಆಸೆಗಳಿತ್ತು ನನ್ನಲ್ಲಿ
    ಹೇಳಿದರೂ ಮುಗಿಯುವಂತಹುದೇ
    ಅನುಭವಿಸಿದರೂ ಸಾಕಾಗುವಂತಹುದೇ
    ಎಷ್ಟೆಲ್ಲಾ ಆಸ್ತಿ ಬಂಗಳೆಗಳಿದ್ದರೇನು?
    ಅದನ್ನು ಅನುಭವಿಸುವ ಆಯುಸ್ಸೊಂದಿರದಿದ್ದರೆ..’

    ಟಿ.ವಿ, ಪ್ರಿಜ್, ಎ.ಸಿ, ಹೀಗೆ
    ಇನ್ನೂ ಇತ್ತು ನನ್ನಲ್ಲಿ ಏನೇನೋ
    ಇಹದ ಸೌಲಭ್ಯವನ್ನು ಮಾಡುವ ಭರದಿ
    ಮರೆತೇ ಬಿಟ್ಟಿದ್ದೆ ನಾನು ಪರದ
    ಸೌಲಭ್ಯದ ಕುರಿತಾಗಿ...

    ಈಗೆನಗೆ ಕಾಲ ಕಳೆಯಲು ಟಿ.ವಿ ಯೂ ಇಲ್ಲ
    ಬಿಸಿಲ ಬೇಗೆ ತಣಿಸಲು ಎ.ಸಿ ಯೂ ಇಲ್ಲ
    ನನ್ನ ಹೇಳಿಕೆಯನ್ನು ಅನುಕ್ಷಣವೂ
    ಈಡೇರಿಸುತ್ತಿದ್ದ ಆ ನನ್ನ ಆಳುಕಾಳುಗಳೂ ಇಲ್ಲ

    ಈ ಭಯಂಕರವಾದ ಕತ್ತಲ ಕಾಡಿನೊಳಗೆ
    ನಾನಿಂದು ಅಸಹಾಯಕ...
    ಹಾವು ಚೇಳಿ ನಂತಹಾ ಕ್ರೂರ ಜಂತುಗಳ
    ನಡುವೆ ನಾನು ಸಂಪೂರ್ಣ ನಿಸ್ಸಹಾಯಕ....,"
    posted by ASHRAF @ 9:08 PM   0 comments
    About Me

    Name: ASHRAF
    Home: India
    About Me: ಅಸ್ಸಲಾಮ್ ಅಲೈಕುಮ್
    See my complete profile
    Previous Post
    Archives
    ನಾ ಬರೆದದ್ದು
    Powered by

    BLOGGER

    Older Posts
    © 2005 ನೇರದಾರಿ Blogger Templates by Isnaini and Cool Cars Pictures